ಸತು ನಮ್ಮ ದೇಹಕ್ಕೆ ಅವಶ್ಯಕವಾದ ಖನಿಜಾಂಶವಾಗಿದೆ. ಇದು ದೇಹದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಇದೀಗ ಕೋವಿಡ್ 19 ರೋಗ ಗುಣಪಡಿಸುವಲ್ಲಿ ಸತು ಪ್ರಮುಖ ಪಾತ್ರವಹಿಸುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಸತು ದೇಹಕ್ಕೆ ಅವಶ್ಯಕವಾದರೂ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ, ಇದನ್ನು ನಾವು ಆಹಾರದ ಮೂಲಕ ತೆಗೆದುಕೊಳ್ಳಬೇಕು. ಒಬ್ಬ ವ್ಯಕ್ತಿ ದಿನಕ್ಕೆ 8-10ಗ್ರಾಂ ಸತು ಸೇವಿಸಬೇಕು. ಇನ್ನು ಗರ್ಭಿಣಿಯರು ಹಾಗೂ ಎದೆ ಹಾಲುಣಿಸುತ್ತಿರುವ ತಾಯಂದಿರು ದಿನಕ್ಕೆ 12ಗ್ರಾಂನಷ್ಟು ಸತು ತೆಗೆದುಕೊಳ್ಳಬೇಕು.
#Coronavirus #covid19 #boostimmunity #zincrichsuperfoods